ಅಡುಗೆ ಎಣ್ಣೆ ( ಕರಿದ ಎಣ್ಣೆ) ಪುನರ್ಬಳಕೆಯಿಂದಾಗುವ ದುಷ್ಪರಿಣಾಮಗಳು . admin December 19, 2018

ಅಡುಗೆ ಎಣ್ಣೆ ( ಕರಿದ ಎಣ್ಣೆ) ಪುನರ್ಬಳಕೆಯಿಂದಾಗುವ ದುಷ್ಪರಿಣಾಮಗಳು .

ಡುಗೆ ಎಣ್ಣೆ ( ಕರಿದ ಎಣ್ಣೆ) ಪುನರ್ಬಳಕೆಯಿಂದಾಗುವ ದುಷ್ಪರಿಣಾಮಗಳು . 

ಅಡುಗೆಯಲ್ಲಿ ಅದರಲ್ಲೂ ವಿಶೇಷವಾಗಿ ಭಾರತೀಯ ಅಡುಗೆ ಪದ್ದತಿಯಲ್ಲಿ ಎಣ್ಣೆಯ ಉಪಯೋಗವು  ಒಂದು ಪ್ರಮುಖ ಭಾಗವೆನ್ನಬಹುದು. “ತಡ್ಕಾ”  ಅಥವಾ ಒಗ್ಗರಣೆ ಯಿಂದ ಹಿಡಿದು  ತರಕಾರಿಗಳನ್ನು ಹುರಿಯಲು ,ತಿಂಡಿಗಳನ್ನು ಕರಿಯಲು  ಎಣ್ಣೆ ಬೇಕೆ ಬೇಕು. ಸಾಮಾನ್ಯವಾಗಿ ಎಲ್ಲಾ   ಅಡುಗೆಯ ಮೊದಲ ಹಂತ – “ಗ್ಯಾಸ್ ಮೇಲೆ ಪ್ಯಾನ್ ಇರಿಸಿ ಮತ್ತು ಅದರೊಳಗೆ ಸ್ವಲ್ಪ ಎಣ್ಣೆಯನ್ನು ಹಾಕಿರಿ” . 

ಅನೇಕ  ಸಲ  ನಾವು  ಪುರಿ , ಬೋಂಡಾ,ಪಕೋಡ/ಭಜ್ಜಿ ಇತ್ಯಾದಿ ತಿಂಡಿ ಪದಾರ್ಥಗಳನ್ನು ಕರಿದ ನಂತರ ಉಳಿದ   ಎಣ್ಣೆಯನ್ನು ಮತ್ತೆ   ಮತ್ತೆ ಬಳಸುತ್ತೇವೆ.ಈ  ರೀತಿ ಎಣ್ಣೆ ಮರುಬಳಕೆ ಅಭ್ಯಾಸವು ಸುರಕ್ಷಿತವಾಗಿದೆಯೇ? ಅದು ಹೇಗೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬುದನ್ನು ನಾವು ತಿಳಿದುಕೋಳ್ಳೋಣ.  

  1. R. ಪ್ರಭಾಕರ, ಆಹಾರ ತಜ್ನರು ( Senior Food Technologist) ಅವರು ಹೇಳುವುದೇನೆಂದರೆ ,  “ಎಣ್ಣೆಯನ್ನು ಮರುಬಳಕೆ ಮಾಡುವುದರಿಂದ   ಆಹಾರ ದಲ್ಲಿ ದೀರ್ಘಕಾಲದಲ್ಲಿ ಕಾಯಿಲೆಗಳನ್ನು ಉಂಟುಮಾಡುವ ಮುಕ್ತ ರಾಡಿಕಲ್ಸಗಳ (Free Radicles ) ರಚನೆಯಾಗುತ್ತದೆ. ಈ Free Radicles ಗಳು ಆರೋಗ್ಯಕರ ಜೀವಕೋಶಗಳಲ್ಲಿ ನೆಲೆ ಮಾಡಿಕೊಂಡು ವಿವಿಧ ರೋಗಗಳಿಗೆ   ಉದಾಹರಣೆ :    ಕ್ಯಾನ್ಸರ್  ಮತ್ತು   ಎಥೆರೋಸ್ಕ್ಲೆರೋಸಿಸ್ ಗೆ (Etheroscelerosis ) ಎಡೆ ಮಾಡಿ ಕೊಟ್ಟು, ಕೆಟ್ಟ ಕೊಲೆಸ್ಟರಾಲ್ ನ ಮಟ್ಟ ಹೆಚ್ಚಾಗಿ ಅಪಧಮನಿ ತಡೆ ( artery blockage )ಗೂ ಸಹ ಕಾರಣವಾಗುತ್ತದೆ.” 

ಎಣ್ಣೆಯನ್ನು ಮರುಬಳಕೆ ಮಾಡುವುದರಿಂದ ಬರುವ ಸಮಸ್ಯೆಗಳು: 

*ಅ್ಯಸಿಡಿಟಿ 

*ಹೃದಯರೋಗ. 

*ಆಲ್ಝೈಮರ್ ಮತ್ತು ಪಾರ್ಕಿನ್ಸನ್ ರೋಗ (Alzheimer’s and Parkinson’s disease. 

* ಗಂಟಲು ಕೆರೆತ  (ಎಣ್ಷೆ ಕಾಯಿಸಿದಾಗ ಹೊರ ಹೊಮ್ಮುವ ಹೊಗೆಯ  ಕಾರಣದಿಂದ). 

ಎಣ್ಣೆಯನ್ನು  ಎಷ್ಟು ಸಾರಿ ಮರುಬಳಿಕೆ ಮಾಡಬಹುದು ಎಂದು ನಿರ್ದಿಷ್ಟ ವಾಗಿ ಹೇಳಲಾಗುವುದಿಲ್ಲ… ಕಾರಣ  ಅದು‌ , 

ನಾವು ಯಾವ  ಎಣ್ಣೆಯನ್ನು ಉಪಯೋಗಿಸಿದ್ದೇವೆ, ಎಷ್ಟು ಹೊತ್ತು ಕಾಯಿಸಲಾಗಿದೆ, ಅದನ್ನು ಕರಿಯಲು ಅಥವಾ ಯಾವ ತರಹದ ಅಡಿಗೆಯ ವಿಧಾನಕ್ಕೆ ಮತ್ತು ಯಾವ ತರಹದ ಆಹಾರದ ವನ್ನು ಬೇಯಿಸಿದ್ದೇವೆ…ಎಂಬ ಮುಂತಾದ ಅಂಶಗಳ ಮೇಲೆ  

ನಿರ್ಧಾರವಾಗುತ್ತದೆ. ಪ್ರತಿ ಬಾರಿ ತಾಜಾ  ಎಣ್ಣೆಯನ್ನು ಬಳಸುವುದು‌ ಒಳ್ಳೆಯದು, ನಿಜ , ಆದರೆ ಕರಿದು ಉಳಿದ ಎಣ್ಣೆಯನ್ನೇನು ಮಾಡುವುದು.? ಅದನ್ನು ವ್ಯರ್ಥ ಮಾಡದೇ   ‘ಸರಿಯಾಗಿ’ ಬಳಕೆ  ಮಾಡಿದರೆ ನಮ್ಮ ಆರೋಗ್ಯದ  ಮೇಲಿನ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು.  

ಎಣ್ಣೆಯನ್ನು ಸುರಕ್ಷಿತವಾಗಿ ಮರುಬಳಕೆ ಮಾಡುವಾಗ ಅನುಸರಿಸಬೇಕಾಗುವ ಕೆಲವು ವಿಚಾರಗಳು: 

*ಅಡುಗೆ ಮಾಡಿದ  ನಂತರ ಉಳಿದ ಎಣ್ಣೆ ಯನ್ನು ತಣ್ಣಗಾಗಿಸಿ ,ನಂತರ ಅದನ್ನು  ಜರಡಿ / ಚೀಸ್- ಬಟ್ಟೆ ಮೂಲಕ ಸೋಸಿ , ಗಾಳಿಯಾಡದ ಗಟ್ಟಿ ಮುಚ್ಚಳವಿರುವ ಡಬ್ಬಿಗೆ ವರ್ಗಾಯಿಸಿ.   ಕರಿದ ಎಣ್ಣೆಯಲ್ಲಿ ಉಳಿದಂತಹ ಆಹಾರದ ತುಣುಕುಗಳು ,ಎಣ್ಣೆಯನ್ನು ಬೇಗನೆ ಹಾಳುಮಾಡುವುದರಿಂದ  ಅದನ್ನು  ಫಿಲ್ಟರ್ ಮಾಡಿ ತೆಗೆಯಬೇಕು. 

*ಮರುಬಳಕೆ ಮಾಡುವಾಗ  ಪ್ರತಿ ಸಲ,   ಎಣ್ಣೆಯ  ಬಣ್ಣ ಮತ್ತು ಸಾಂದ್ರತೆ  ಪರೀಕ್ಷಿಸಿ .ಇದು ಬಣ್ಣದಲ್ಲಿ ಗಾಢವಾಗಿದ್ದರೆ ಮತ್ತು  ಜಿಡ್ಡು / ಜಿಗುಟಾದಂತಿದ್ದರೆ ಅದನ್ನು ಅಡಿಗೆಗೆ ಬಳಸಬೇಡಿ. 

*ಎಣ್ಷೆಯನ್ನು ಬಿಸಿಮಾಡುವ ಹೊತ್ತಿನಲ್ಲಿ  ಬೇಗನೆ ಹೊಗೆ   ಬರುತ್ತಿದ್ದರೆ,ಅದನ್ನು ಉಪಯೋಗಿಸಬಾರದು.ಏಕೆಂದರೆ ಅದರಲ್ಲಿ   ಪಾರ್ಕಿನ್ಸನ್’ಸ್     , ಅಲ್ಝೈಮರ್ನ, ಸ್ಟ್ರೋಕ್, ಪಿತ್ತಜನಕಾಂಗದ ಕಾಯಿಲೆ  ಸೇರಿದಂತೆ ಹಲವಾರು ಕಾಯಿಲೆಗಳಿಗೆ ಸಂಬಂಧಿಸಿರುವ  ವಿಷಕಾರಿ ಪದಾರ್ಥವಾದ HNE ಯು ಸಂಗ್ರಹವಾಗಿರುತ್ತದೆ. 

* ಎಣ್ಣೆಯನ್ನು ಹಿತಮಿತವಾಗಿ‌ ಬಳಸುವುದು‌ ಒಳ್ಳೆಯದು. ಕರಿಯಲು/ ಅಡುಗೆಗೆ ಬೇಕಾದಷ್ಟೇ ಎಣ್ಣೆ ಯನ್ನು ಕಡಾಯಿ ಯಲ್ಲಿ ಹಾಕಿರಿ. 

‘ಹೆಚ್ಚು ಎಣ್ಣೆಯನ್ನು ಬಳಸುವುದರಿಂದ ಆಹಾರದ ರುಚಿ     ಹೆಚ್ಚಾಗುತ್ತದೆ’ ಎಂಬುವುದು‌ ತಪ್ಪು.  ಹೆಚ್ಚು  ಎಣ್ಣೆಯು ಆಹಾರವನ್ನು ಹೆಚ್ಚು  ಬೇಯಿಸುತ್ತದೆ. ಅಲ್ಲದೆ, ಅದು ನಮ್ಮ ದೇಹದ ಕೊಲೆಸ್ಟ್ರಲ್ ಮಟ್ಟಕ್ಕೆ ಒಳ್ಳೆಯದಲ್ಲ. 

ಅಡುಗೆ ಎಣ್ಣೆಯ ಬಗ್ಗೆ ಹೆಚ್ಚಿನ ಮಾಹಿತಿ: 

ಎಣ್ಣೆ  ಮೂಲತಃ ಮೂರು ವಿಧದ ಕೊಬ್ಬಿನ ಆಮ್ಲಗಳನ್ನು ಹೊಂದಿರುತ್ತದೆ.  

*ಸ್ಯಾಚುರೇಟೆಡ್ (ಎಸ್ಎಫ್ಎ),  

*ಪಾಲಿ ಅನ್  ಸ್ಯಾಚುರೆಟೆಡ್  ಕೊಬ್ಬಿನ ಆಮ್ಲಗಳು (ಪಿ ಯುಎಫ್ಎ-  PUFA)  

ಮತ್ತು 

*ಮೊನೊ ಆನ್  ಸ್ಯಾಚುರಟೆಡ್ ಕೊಬ್ಬಿನ ಆಮ್ಲಗಳು (ಎಮ್ ಯು ಎಫ್ಎ-  MUFA).  

ಸ್ಯಾಚುರೆಟೆಡ್ ಕೊಬ್ಬುಗಳು ಕೋಣೆಯ ಉಷ್ಣಾಂಶದಲ್ಲಿ ಘನರೂಪವಾಗಿರುತ್ತವೆ ಮತ್ತು  ಕಾಯಿಸಿದಾಗ ಹೆಚ್ಚಿನ ತಾಪಮಾನವನ್ನು ಸಹಿಸಿಕೊಳ್ಳಬಲ್ಲವು.  

ಪಾಲಿ ಮತ್ತು ಮೊನೊ-ಸ್ಯಾಚುರೆಟೆಡ್ ಕೊಬ್ಬುಗಳು ಕೋಣೆಯ ಉಷ್ಣಾಂಶದಲ್ಲಿ ದ್ರವರೂಪವಾಗಿದ್ದು, ಸುಲಭವಾಗಿ ಆಕ್ಸಿಡೀಕರಣಗೊಳ್ಳುತ್ತವೆ. (Oxidation) 

* ಮತ್ತೊಂದು ಪ್ರಮುಖ ವಿಷಯವೆಂದರೆ ಎಣ್ಣೆಯಲ್ಲಿರುವ    ಒಮೆಗಾ -6 ಮತ್ತು ಒಮೆಗಾ -3  ಕೊಬ್ಬಿನಾಮ್ಲಗಳ ಅನುಪಾತ.  

ಏಕೆಂದರೆ   ಕೆಲವು ಒಮೆಗಾ -6 ಕೊಬ್ಬಿನಾಮ್ಲಗಳು ದೇಹದಲ್ಲಿ  ಉರಿಯೂತವನ್ನು (inflammation) ಉಂಟುಮಾಡುತ್ತವೆ, ಆದರೆ ಒಮೆಗಾ -3 ಕೊಬ್ಬಿನಾಮ್ಲಗಳು ಉರಿಯೂತವನ್ನು ತಗ್ಗಿಸುತ್ತವೆ. ಸಂಶೋಧಕರ ಪ್ರಕಾರ,     ನಾರ್ಮಲ್  /  ಸರಿಯಾದ ಅನುಪಾತವು 2: 1 ರಿಂದ 4: 1 ರವರೆಗೆ ಇರಬೇಕು. ಭಾರತೀಯ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಪ್ರಕಾರ ಒಳ್ಳೆಯ ಗುಣಮಟ್ಟದ ಎಣ್ಣೆಯ ಎಸ್ಎಫ್ಎ : ಮ್ಯುಫಾ: ಪ್ಯುಫಾ ಅನುಪಾತ ವು 27-33% : 33-40%: 27-33%. 

ಎಣ್ಣೆಯ ಆಯ್ಕೆಯನ್ನು ಮಾಡುವುದು ಹೇಗೆ? 

ಅಡುಗೆ ಎಣ್ಣೆಯನ್ನು   ಆಯ್ಕೆ ಮಾಡುವಾಗ,  ಮೊದಲು ಅದರ  ಲೇಬಲ್ ಓದಿ ಪರೀಕ್ಷೆ ಮಾಡಿ.  

ಅದರಲ್ಲಿ 

-ಸ್ಯಾಚುರೇಟೆಡ್ ಕೊಬ್ಬುಗಳನ್ನು ಕಡಿಮೆ  (ಪ್ರತಿ 10 ಗ್ರಾಂಗೆ 2 ಗ್ರಾಮ್ ಗಿಂತ ಕಡಿಮೆ) ಇರಬೇಕು. 

-ಟ್ರಾನ್ಸ್ ಕೊಬ್ಬುಗಳು  ಇರಬಾರದು  

ಮತ್ತು   

-ಹೆಚ್ಚಿನ ಪ್ರಮಾಣದಲ್ಲಿ MUFA ಮತ್ತು PUFA ಇರಬೇಕು. 

(ಆದರೆ PUFA < MUFA  ಗಿಂತ ಕಡಿಮೆ ಪ್ರಮಾಣದಲ್ಲಿ ಇರಬೇಕು.) 

MUFA ಮತ್ತು PUFA ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಲ್ ಅನ್ನು ಕಡಿಮೆಗೊಳಿಸುತ್ತದೆ . 

ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಕೊಬ್ಬುಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ಇದರಿಂದ ಹೃದಯಾಘಾತ ಆಗುವ ಸಂಭಾವನೆ ಹೆಚ್ಚಾಗುತ್ತದೆ.  

ಮೋನೋ ಸ್ಯಾಚುರೇಟೆಡ್ ಕೊಬ್ಬುಗಳು  HDL ಅನ್ನು ಹೆಚ್ಚಿಸುತ್ತದೆ ಮತ್ತು LDL ಅನ್ನು ಕಡಿಮೆ ಮಾಡುತ್ತದೆ . ಇದರಿಂದ  ಹೃದಯರಕ್ತನಾಳದ ಕಾಯಿಲೆಯ ( Cardiovascular) ಅಪಾಯವು ಕಡಿಮೆಯಾಗುತ್ತದೆ. ಹೆಚ್ಚಿನ ಪ್ರಮಾಣದ ಪಾಲಿ ಸ್ಯಾಚುರೇಟೆಡ್ ಕೊಬ್ಬನ್ನು ಒಳಗೊಂಡಿರುವ ಎಣ್ಣೆಯು  ಅಸ್ಥಿರವಾದುದುದರಿಂದ ಅದನ್ನು  ಉಪಯೋಗಿಸಬಾರದು. 

1.Vegetable oil ತರಕಾರಿ ಎಣ್ಣೆ  

ಇದು ಸಾಮಾನ್ಯವಾಗಿ  ಅಡುಗೆಗೆ  ಬಳಸಲು ಮತ್ತು ಕರಿಯಲು ಒಳ್ಳೆಯದು. ಇದು ಸೂರ್ಯಕಾಂತಿ, ಸೋಯಾಬೀನ್ ಮುಂತಾದ ವಿವಿಧ ರೀತಿಯ ಎಣ್ಣೆಗಳ ಮಿಶ್ರಣವಾಗಿದೆ. vegetable oil  (ತರಕಾರಿ   ಎಣ್ಣೆ) ಯನ್ನು  ’ಕೊಲೆಸ್ಟರಾಲ್ ಕಡಿಮೆ’ ಅಂತ  ಆಯ್ಕೆ ಮಾಡಿಕೊಳ್ಳುವದು ಸೂಕ್ತವೇ?   vegetable oil ನ್ನು    “ಕೊಲೆಸ್ಟ್ರಾಲ್ ಹೊಂದಿರದ ” ಸಸ್ಯಗಳಿಂದ  ತಯಾರಿಸಲಾಗುತ್ತದೆ. ಹಾಗಾಗಿ ‘ಕಡಿಮೆ ಕೊಲೆಸ್ಟ್ರಾಲ್  vegetable oil ‘   ಮಾರುಕಟ್ಟೆಯಲ್ಲಿ  ಕೇವಲ ‘ಗಿಮಿಕ್’ ಆಗಿದೆ ಅಷ್ಟೇ ! ಅಲ್ಲವೇ ? 

2.ಸೂರ್ಯಕಾಂತಿ ಎಣ್ಣೆ  

ಈ ಎಣ್ಣೆ  ಯಲ್ಲಿ ಸ್ಯಾಚುರೇಟೆಡ್ ಕೊಬ್ಬಿನ ಅಂಶ  ಕಡಿಮೆ ಇದ್ದು   ಒಮೆಗಾ -6: ಒಮೆಗಾ – 3 ಅನುಪಾತ ವು  39.4: 1 ಹೊಂದಿರುತ್ತದೆ 

ಇದರಲ್ಲಿ  ವಿಟಮಿನ್- E ಕೂಡ ಉತ್ತಮ ಪ್ರಮಾಣದಲ್ಲಿದೆ 

3.Rice Bran .ಅಕ್ಕಿ ಹೊಟ್ಟು/ತೌಡು ಎಣ್ಣೆ  

ಇದು ಹೆಚ್ಚಿನ  ಸ್ಮೋಕ ಪಾಯಿಂಟ್  ಹೊಂದಿದೆ.  

ಇದು ಕೊಲೆಸ್ಟ್ರಲ್ ಹೀರಿಕೊಳ್ಳುವಿಕೆ ಯನ್ನು ಕಡಿಮೆಗೊಳಿಸುವ ಮತ್ತು ಕೊಲೆಸ್ಟರಾಲ್ ಎಲಿಮಿನೇಷನ್ ಹೆಚ್ಚಿಸುವ ಮೂಲಕ ಕೊಲೆಸ್ಟರಾಲ್ ಕಡಿಮೆಗೊಳಿಸುವ ಗುಣಗಳನ್ನು ಹೊಂದಿರುವ ಗಾಮಾ ಓರಿಝಾನಲ್ ( gamma oryzanol ಎಂಬ ಘಟಕವನ್ನು ಒಳಗೊಂಡಿದೆ. 

4.ಆಲಿವ್ ಎಣ್ಣೆ -    

ಇದರಲ್ಲಿ  ಎಕ್ಸ್ಟ್ರಾ ವರ್ಜಿನ್ ,ವರ್ಜಿನ್, ರಿಫೈಂಡ್, ಇತ್ಯಾದಿಗಳಂತಹ ವಿಭಿನ್ನ  ಪ್ರಕಾರಗಳಿವೆ. 

ಎಕ್ಸ್ಟ್ರಾ ವರ್ಜಿನ್ ಆಲಿವ್ ಎಣ್ಣೆ ಆರೋಗ್ಯಕಾರಿ ಕಾರಣ  ಅದರಲ್ಲಿ 70% ಕೊಬ್ಬು MUFA ಆಗಿರುತ್ತದೆ. ಆದರೆ ಇದಕ್ಕೆ ಕಡಿಮೆ ಸ್ಮೋಕ್ ಪಾಯಿಂಟ್ ಮತ್ತು ಬಲವಾದ ಪರಿಮಳವಿದೆ. 

  1. 5. Saffola Active oil ಸಫೋಲಾ ಆಕ್ಟಿವ್ ಎಣ್ಣೆ-

ಹೃದಯದ ಆರೋಗ್ಯವನ್ನು ಕಾಪಾಡುವ ಒಮೆಗಾ -3 ಮತ್ತು ಓರಿಜನಾಲ್ – ಎಂಬ ಎರಡು ಅಂಶಗಳು ಈ ಎಣ್ಣೆಯಲ್ಲಿವೆ. ಇದನ್ನುಅಕ್ಕಿ ಹೊಟ್ಟು (Rice Bran) ಮತ್ತು ಸೋಯಾಬೀನ್ ಎಣ್ಣೆಯಿಂದ ತಯಾರಿಸಲಾಗುತ್ತದೆ, ಇದು ವಿಟಮಿನ್ E ಯನ್ನೂ ಒಳಗೊಂಡಿದೆ.ಈ ಎರಡೂ ಎಣ್ಣೆಗಳು  ಹೃದಯರಕ್ತನಾಳ ಸಂಬಂಧಿಸಿದ ಅಪಾಯವನ್ನು ಕಡಿಮೆ ಮಾಡುತ್ತದೆ .  

  1. ಮಿಶ್ರಎಣ್ಣೆಗಳುReady Blends

ಎಲ್ಲ ತರಹದ ಅಗತ್ಯವಾದ ಕೊಬ್ಬಿನಾಮ್ಲಗಳನ್ನು ಪಡೆಯಲು  ಮಿಶ್ರ ಎಣ್ಣೆಯನ್ನು ಸಹ‌ ಬಳಸಬಹುದು.  

ಉದಾಹರಣೆಗೆ ಅಕ್ಕಿ ಹೊಟ್ಟು (ರೈಸ್ ಬ್ರಾನ್) + ಆಲಿವ್ ಎಣ್ಣೆ  

ಅಥವಾ 

ಅಕ್ಕಿ ಹೊಟ್ಟು (ರೈಸ್ ಬ್ರಾನ್)+ ಸೂರ್ಯಕಾಂತಿ /   ಸನ್ ಫ್ಲಾವರ್ ಎಣ್ಣೆ . 

ರೆಡಿ ಮಿಶ್ರಣಗಳನ್ನು (ready blends ) ಹೊಂದಿರುವ ಯಾವುದೇ ಬ್ರ್ಯಾಂಡ್ ನ ಎಣ್ಣೆಯನ್ನು ನೀವು ಆಯ್ಕೆ ಮಾಡಬಹುದು ಅಥವಾ ಎರಡು ತರಹದ ಎಣ್ಣೆಯನ್ನು  ಪ್ರತ್ಯೇಕವಾಗಿ ಬಳಸಿ ಅಥವಾ  ಪ್ರತಿ ಎರಡು ತಿಂಗಳಿಗೊಮ್ಮೆ ಎಣ್ಣೆ change ಮಾಡಿ ಬಳಸಬಹುದು 

*ಭಾರತೀಯ ಪದ್ದತಿಯ ರೆಸಿಪಿಗಳನ್ನು ಮಾಡಲು ಯಾವ ಎಣ್ಣೆ ಒಳ್ಳೆಯದು?* 

ಭಾರತೀಯ ಆಹಾರವನ್ನು ಸಾಮಾನ್ಯವಾಗಿ ಹೆಚ್ಚಿನ ತಾಪಮಾನದಲ್ಲಿ ಬೇಯಿಸಲಾಗುತ್ತದೆಯಾದ್ದರಿಂದ,  ಉಪಯೋಗಿಸುವ ಎಣ್ಣೆ     ಹೆಚ್ಚಿನ ” ಸ್ಮೋಕ್ ಪಾಯಿಂಟ್  ” ಹೊಂದಿರಬೇಕು, ಇದರಿಂದ ಅದು ಸುಲಭವಾಗಿ breakdown ಆಗುವುದಿಲ್ಲ  ,ಅಲ್ಲದೆ ಕೆಟ್ಟ ವಾಸನೆಯನ್ನು ಬರುವುದಿಲ್ಲ 

ಪ್ರತಿಯೊಂದು ಎಣ್ಣೆ ಗೆ ತನ್ನದೇ ಆದ   ಸ್ಮೋಕ್ ಪಾಯಿಂಟ್ smoke point ಇದೆ. ಅಂದರೆ ಈ ಪಾಯಿಂಟ್ ನಲ್ಲಿ ಅದು ಹೊತ್ತಿ  ಉರಿಯಲು ಆರಂಭಿಸಿ ಅಪಾಯಕಾರಿ ರಾಸಾಯನಿಕಗಳನ್ನು ಉತ್ಪತ್ತಿ ಮಾಡಲು ಪ್ರಾರಂಭಿಸುತ್ತದೆ. ಆದ್ದರಿಂದ ನಮ್ಮ ಅಡುಗೆ ಮಾಡುವ ವಿಧಾನವನ್ನು ಅವಲಂಬಿಸಿ, ಕಡಿಮೆ ಅಥವಾ ಹೆಚ್ಚಿನ ಸ್ಮೋಕ್ ಪಾಯಿಂಟ್ ಹೊಂದಿದ ಎಣ್ಣೆಯನ್ನು  ಆಯ್ಕೆ ಮಾಡಬೇಕು. ಅಡುಗೆ ಎಣ್ಣೆಗಳು ಬೇರೆ ಬೇರೆ ತರಹ …ಅದರಂತೆ ಅವುಗಳ smoke point ಸಹ  ಒಂದೇ  ಸಮ  ಆಗಿರುವುದಿಲ್ಲ. ಅವುಗಳಲ್ಲಿ ಕೆಲವು ಹೆಚ್ಚಿನ ಹೊಗೆ ಬಿಂದುವನ್ನು (smoke point)ಹೊಂದಿದ್ದು,, ಅಂತಹ ಎಣ್ಣೆಯನ್ನು  ಕರಿಯಲು,ಡೀಪ್ ಫ್ರೈ ಮಾಡಲು ಬಳಸಬಹುದು.  ಏಕೆಂದರೆ  ಅವುಗಳು ಹೆಚ್ಚಿನ. ಶಾಖದಲ್ಲಿ  break down ಆಗುವುದಿಲ್ಲ. ಉದಾಹರಣೆಗೆ  ಸೂರ್ಯಕಾಂತಿ, ಸ್ಯಾಫ್ಲವರ್, ಸೋಯಾಬೀನ್, ಅಕ್ಕಿ ಹೊಟ್ಟು (ರೈಸ್ ಬ್ರಾನ್), ಕಡಲೆಕಾಯಿ (ಶೇಂಗಾ), ಎಳ್ಳು, ಸಾಸಿವೆ ಮತ್ತು ಕ್ಯಾನೋಲ ಎಣ್ಣೆ  ಇವೆಲ್ಲವುಗಳು ಹೆಚ್ಚಿನ  ಸ್ಮೋಕ್ ಪಾಯಿಂಟ್ ಹೊಂದಿದ  ಎಣ್ಣೆಗಳು. 

ಆಲಿವ್ ಎಣ್ಣೆಯು ಒಂದು  ಮಿಡಿಯಮ್ ಸ್ಮೋಕ್ ಪಾಯಿಂಟ್  ಹೊಂದಿದ್ದು, ಇದರಿಂದಾಗಿ ಅತಿ ಹೆಚ್ಚಿನ ಉಷ್ಣತೆಯ ಅಡುಗೆಗೆ ಬಳಸಲಾಗುವುದಿಲ್ಲ. Sautéing ಮತ್ತು salad ಗಳಿಗೆ ಇದು ಅತ್ಯುತ್ತಮವಾಗಿದೆ. 

ನೀವು  stir fry , ಫ್ರೈ, ಡೀಪ್ ಫ್ರೈ ಅಥವಾ ಹೆಚ್ಚು ತಾಪಮಾನದ ಬೇಕಿಂಗ್ ಮಾಡಲು  ಯೋಚಿಸಿದರೆ, ಆ ಶಾಖವನ್ನು ತಡೆದುಕೊಳ್ಳುವ ಅಡುಗೆ ಎಣ್ಣೆಯನ್ನು ಆಯ್ಕೆ ಮಾಡಿ, ಅಂದರೆ ಹೆಚ್ಚಿನ ಸ್ಮೋಕ್ ಪಾಯಿಂಟ್ ಹೊಂದಿರುವ ಎಣ್ಣೆಯನ್ನು ಆರಿಸಿಕೊಳ್ಳಿ. ಕಡಿಮೆ   ಸ್ಮೋಕ ಪಾಯಿಂಟ್ ಹೊಂದಿದ   ಎಣ್ಣೆಯನ್ನು  ಆವಿಯಲ್ಲಿ ಬೇಯಿಸಲು ( steaming ),stewing  ಮತ್ತು ಸಲಾಡ್  ಗಾಗಿ ಬಳಸಿರಿ. 

ಆಹಾರದ ವಿಷಯ  ಬಂದಾಗ ಪ್ರತಿ ಮಹಿಳೆಯು ತನ್ನ ಕುಟುಂಬಕ್ಕೆ ಉತ್ತಮವಾದುದನ್ನು ಬಯಸುತ್ತಾಳೆ.ಆದರೆ  ಮಹಿಳೆಯರು  ಸರಿಯಾದ ಮತ್ತು ಉತ್ತಮವಾದ ಅಡುಗೆ ಎಣ್ಣೆಯ ಆಯ್ಕೆ ಮತ್ತು ಅದನ್ನು  ಬಳಸುವ ಬಗೆ ಹೇಗೆಂದು ತಿಳಿಯದೇ ಗೊಂದಲಕ್ಕೆ  ಈಡಾಗಿದ್ದಾರೆ.    ಮಾರುಕಟ್ಟೆಯಲ್ಲಿ  ಅನೇಕ ವಿಧದ ಮತ್ತು ಬ್ರಾಂಡ್‌ಗಳ ಎಣ್ಣೆಗಳ ಲಭ್ಯತೆಯೇ ಈ  ಗೊಂದಲಕ್ಕೆ  ಕಾರಣ .

ಅಡುಗೆ ಎಣ್ಣೆಗಳು ಮತ್ತು ಅವುಗಳನ್ನು ಸರಿಯಾಗಿ ಬಳಸುವ ಸಲಹೆಗಳು. 

  1. ತೆಂಗಿನಎಣ್ಣೆ:

ಇದನ್ನು ದೇಶದ ಬಹುತೇಕ ಭಾಗಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ತೆಂಗಿನ ಎಣ್ಣೆಯನ್ನು ಅನಾರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಆದರೆ ಇದು ಮೊನೊಅನ್ ಸ್ಯಾಚುರೆಟೆಡ್ ಮತ್ತು ಪೊಲಿ ಅನ್ ಸ್ಯಾಚುರೆಟೆಡ್   ಕೊಬ್ಬನ್ನು (ಒಳ್ಳೆಯ ಕೊಬ್ಬುಗಳು) ಒಳಗೊಂಡಿದೆ.  ಇದು ಕ್ಯಾನ್ಸರ್  ಮತ್ತು ಆಲ್ಝೈಮರ್ನ ಕಾಯಿಲೆಯಂತಹ ನರವೈಜ್ಞಾನಿಕ ಅಸ್ವಸ್ಥತೆಗಳನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುವ ಒಮೆಗಾ-3 ಕೊಬ್ಬನ್ನು ಸಹ ಒಳಗೊಂಡಿದೆ. 

ರಿಫೈನ್ಡ್. ತೆಂಗಿನ ಎಣ್ಣೆ ಹೆಚ್ಚಿನ ಸ್ಮೋಕ್ ಪಾಯಿಂಟ್.  ನ್ನು (232 ° C) ಹೊಂದಿದೆ ಮತ್ತು ಹೆಚ್ಚಿನ ಉಷ್ಣಾಂಶದಲ್ಲಿ ಆಹಾರವನ್ನು ಕರಿಯಲು ಸೂಕ್ತವಾಗಿರುತ್ತದೆ. ಅದನ್ನು ಗ್ರಿಲ್ಲಿಂಗ್, ಟೆಂಪರಿಂಗ್, ಮತ್ತು  ಸೀಸನಿಂಗ್ ಗೆ  ಕೂಡ ಬಳಸಬಹುದು.ಅನ್ ರಿಫೈನ್ಡ್   ತೆಂಗಿನ ಎಣ್ಣೆ ಕಡಿಮೆ  ಸ್ಮೋಕ ಪಾಯಿಂಟ್ ನ್ನು ಹೊಂದಿದೆ (177 ° C) ಆದರೆ ಇದರ ಪೌಷ್ಟಿಕಾಂಶ ರಿಫೈನ್ಡ್ ಎಣ್ಣೆ ಗಿಂತ ಹೆಚ್ಚಾಗಿದೆ. 

*ತೆಂಗಿನ ಎಣ್ಣೆ ಬಳಕೆಯ* ವಿವಾದಬಗ್ಗೆಅದು ನಿಜಕ್ಕೂ ಅಪಾಯ ವೇ?….ಇನ್ನಷ್ಟು ದಿರಿ.*  

  1. ಶೇಂಗಾ / ಕಡಲೆಕಾಯಿಎಣ್ಣೆ:   232 ° C ನ     ಸ್ಮೋಕ್ಪಾಯಿಂಟ್ದೊಂದಿಗೆ, ಎಲ್ಲಾಅಡುಗೆಉದ್ದೇಶಗಳಿಗಾಗಿಕಡಲೆಕಾಯಿಎಣ್ಣೆಯನ್ನುಬಳಸಬಹುದು. ಇದುಉತ್ತಮಲಿಪಿಡ್ಪ್ರೊಫೈಲ್ಅನ್ನುಹೊಂದಿದೆಮತ್ತುಅಧಿಕಪ್ರಮಾಣದಲ್ಲಿಅಧಿಕಮೊನೊಅನ್ಸ್ಯಾಚುರೆಟೆಡ್ಕೊಬ್ಬನ್ನುಹೊಂದಿರುತ್ತದೆ. ಇತರಅಡುಗೆಎಣ್ಣೆಗಳಿಗಿಂತಲೂಇದುಹೆಚ್ಚಿನಶೆಲ್ಫ್ಟೈಮ್ (ಅಂದರೆಹೆಚ್ಚಿನಕಾಲದವರೆಗೆಕೆಡದಿರದಂತೆ) ಹೊಂದಿದೆ.
  2. ಸೂರ್ಯಕಾಂತಿಎಣ್ಣೆ:

ಸೂರ್ಯಕಾಂತಿ ಎಣ್ಣೆಯು ಸಹ   ಕಡಲೇಕಾಯಿ ಎಣ್ಣೆಯಂತೆ ಹೆಚ್ಚಿನ ಸ್ಮೋಕ್ ಪಾಯಿಂಟ್  (232 ° C)  ಹೊಂದಿದೆ., ಹಾಗಾಗಿ ಮಧ್ಯಮದಿಂದ – ಹೆಚ್ಚಿನ ಉಷ್ಣತೆ ಅಡುಗೆಗೆ, ಸಲಾಡ್ ಡ್ರೆಸಿಂಗ್ ಗೆ ಮತ್ತು shortening  ಮಾಡಲು ಬಳಸಬಹುದು. ಆದರೆ ಆರೋಗ್ಯ ಪ್ರಯೋಜನಗಳ ವಿಷಯದಲ್ಲಿ ಸೂರ್ಯಕಾಂತಿ ಎಣ್ಣೆ ಕಡಲೆಕಾಯಿ ಎಣ್ಣೆಗಿಂತಲೂ ಉತ್ತಮವಾಗಿದೆ ಏಕೆಂದರೆ ಇದು    ಹೆಚ್ಚಿನ ಪೊಲಿ ಅನ್ ಸ್ಯಾಚುರೆಟೆಡ್ ಕೊಬ್ಬುಗಳು ಮತ್ತು  ವಿಟಮಿನ್ E  ನಿಂದ ಸಮೃದ್ಧವಾಗಿದೆ. 

*ಆರೋಗ್ಯಕರವಾಗಿ ಮತ್ತು   *ತಾರುಣ್ಯಭರಿತರಾಗಿ ಉಳಿಯಲು  ವಿಟಮಿನ್ E ಹೇಗೆ ಸಹಾಯ ಮಾಡುತ್ತದೆಎಂಬುದರ ಬಗ್ಗೆ* ಇನ್ನಷ್ಟು ಓದಿರಿ*  

  1. Rice Bran oil ಅಕ್ಕಿ ಹೊಟ್ಟಿನ  ಎಣ್ಣೆ (ರೈಸ್ ಬ್ರಾನ್):

ಅಕ್ಕಿ ಹೊಟ್ಟಿನ ಎಣ್ಣೆ 254 ° C ನಷ್ಟು   ಸ್ಮೋಕ್ ಪಾಯಿಂಟ್ ನ್ನು ಹೊಂದಿದೆ ಮತ್ತು ಇದು ಕರಿಯಲು, saute, ಡ್ರೆಸಿಂಗ್, ಗ್ರಿಲ್ಲಿಂಗ್ ಮತ್ತು ಬೇಕಿಂಗ್ ಗೆ ಒಳ್ಳೆಯದು.. ಇದು ಸ್ಯಾಚುರೇಟೆಡ್ ಮತ್ತು ಅನ್ ಸ್ಯಾಚುರೆಟೆಡ್ ಕೊಬ್ಬು ಉತ್ತಮ  ಅನುಪಾತ ದಿಂದ ಮತ್ತು    ಆಂಟಿ-ಆಕ್ಸಿಡಂಟ್  (Antioxidants) ಗಳಿಂದ ಸಹ ಸಮೃದ್ಧವಾಗಿದೆ, ಇದು ಹೆಚ್ಚಿನ ತಾಪಮಾನದಲ್ಲಿ ಬದಲಾವಣೆ ಹೊಂದದೆ ಸ್ಥಿರವಾಗಿರುತ್ತದೆ. 

 5.  ಆಲಿವ್ ಎಣ್ಣೆ:  

ಆಲಿವ್ ಎಣ್ಣೆ ಮೆಡಿಟರೇನಿಯನ್ ಆಹಾರದ ಪ್ರಮುಖ ಅಂಶವಾಗಿದೆ. ಇದು ಅನ್ ಸ್ಯಾಚುರೆಟೆಡ್ ಕೊಬ್ಬುಗಳಿಂದ ಸಮೃದ್ಧವಾಗಿದೆ ಮತ್ತು ಬಹಳಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.  

ವಿಭಿನ್ನ ಸ್ಮೋಕಿಂಗ್  ಪಾಯಿಂಟ್   ಹೊಂದಿರುವ, ವಿವಿಧ ರೀತಿಯ ಆಲಿವ್ ಎಣ್ಣೆ ಮಾರುಕಟ್ಟೆಯಲ್ಲಿ ಲಭ್ಯವಿದೆ. 

Extra virgin  ಆಲಿವ್ ಎಣ್ಣೆಯನ್ನು ನೇರವಾಗಿ ಆಲಿವ್ ಹಣ್ಣುಗಳಿಂದ ಪಡೆಯಲಾಗುತ್ತದೆ. ಇದು ಎಲ್ಲಾ ರೀತಿಯ ಆಲಿವ್ ಎಣ್ಣೆಗಳಿಗಿಂತ   ಕಡಿಮೆ  ಸ್ಮೋಕಿಂಗ್  ಪಾಯಿಂಟ್   ನ್ನು (160 ° C) ಹೊಂದಿದೆ. ಆದ್ದರಿಂದ  ಕರಿಯಲು, saute ಮಾಡಲು ಅಥವಾ ಡೀಪ್ ಫ್ರೈ  ಮಾಡಲು ಸೂಕ್ತವಲ್ಲ.  ಕೇವಲ ಸಲಾಡ್ ಡ್ರೆಸ್ಸಿಂಗ್ ಮತ್ತು drizzling ಗಾಗಿ ಎಕ್ಸ್ಟ್ರಾ ವರ್ಜಿನ್ ಆಲಿವ್ ಎಣ್ಣೆಯನ್ನು ಬಳಸುವುದು ಉತ್ತಮ. 

Virgin ಆಲಿವ್ ಎಣ್ಣೆಯನ್ನು ನೇರವಾಗಿ ಆಲಿವ್ ಗಳಿಂದ ಬೇರ್ಪಡಿಸಲಾಗುತ್ತದೆ ಆದರೆ extra virgin  ಆಲಿವ್ ಎಣ್ಣೆಗಿಂತ ಇದು ಹೆಚ್ಚು ಆಮ್ಲೀಯತೆಯನ್ನು ಹೊಂದಿರುತ್ತದೆ, ಏಕೆಂದರೆ ಕಳಿತ ಹಣ್ಣುಗಳನ್ನು ಹೊರತೆಗೆಯಲು ಬಳಸಲಾಗುತ್ತದೆ. ಇದು ಸ್ವಲ್ಪ ಹೆಚ್ಚಿನ   ಸ್ಮೋಕಿಂಗ್  ಪಾಯಿಂಟ್   ಹೊಂದಿದೆ (216 ° C). ಕಡಿಮೆ ಮತ್ತು ಮಧ್ಯಮ ಉಷ್ಣಾಂಶದಲ್ಲಿ sauté  ಅಥವಾ ಅಡುಗೆಗೆ ಇದನ್ನು ಬಳಸಬಹುದು. 

Light ಆಲಿವ್ ಎಣ್ಣೆ ಮತ್ತು extra light ಆಲಿವ್ ಎಣ್ಣೆಯನ್ನು refined ಆಲಿವ್ ತೈಲದಿಂದ ಪಡೆಯಲಾಗುತ್ತದೆ ಮತ್ತು ಇದು ಸಾಮಾನ್ಯವಾಗಿ virgin ಆಲಿವ್ ಎಣ್ಣೆಗಳ ಸಂಯೋಜನೆಯಾಗಿದೆ. ಹೆಚ್ಚಿನ  ಸ್ಮೋಕಿಂಗ್  ಪಾಯಿಂಟ್ (242 ° C) ಇದೆ ಮತ್ತು ಬೇಯಿಸುವ ಮತ್ತು ಹೆಚ್ಚಿನ ತಾಪಮಾನದಲ್ಲಿ ಮಾಡುವ ಅಡುಗೆಗಾಗಿ ಉತ್ತಮ ಆಯ್ಕೆಯಾಗಿರುತ್ತದೆ. 

  1. ಪಾಮ್ಎಣ್ಣೆ. Palm Oil

ದಿನಪತ್ರಿಕೆಗಳಲ್ಲಿ ಬಂದ  EMRI ಫಲಿತಾಂಶಗಳ ಪ್ರಕಾರ  ,  50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ , ಹಾರ್ಟ್ ಅಟ್ಯಾಕ್  ಹೆಚ್ಚಾಗಿ  ಕಂಡುಬರುತ್ತಿದೆ. ಇದಕ್ಕೆ ಕಾರಣ ಪಾಮ್ ಆಯಲ್ ( ಪಾಮ್ ಎಣ್ಣೆ) ಎಂದರೆ ಆಶ್ಚರ್ಯ ವೇನಲ್ಲ. ಏಕೆಂದರೆ ಪಾಮ್ ಎಣ್ಣೆ ಯಲ್ಲಿ ತಯಾರಾದ ಆಹಾರ ಸೇವನೆ,   ಆಲ್ಕೋಹಾಲ್  ಮತ್ತು ಧೂಮಪಾನದಷ್ಟೇ    ಅಪಾಯಕಾರಿ. ಜಗತ್ತಿನಲ್ಲಿ  ಭಾರತವು ಅತಿ ಹೆಚ್ಚು    ಪಾಮ್ ಎಣ್ಣೆ ಆಮದು ಮಾಡಿಕೊಳ್ಳುತ್ತಿದೆ. ಕಾರಣ ಈ ಪಾಮ್ ಎಣ್ಣೆ ಮಾಫಿಯಾ!!. 

ನಮ್ಮ ದೇಶದ ಭವಿಷ್ಯ – ನಮ್ಮ ಮಕ್ಕಳು   ದೊಡ್ಡ ಅಪಾಯದಲ್ಲಿ ಸಿಲುಕಿದ್ದಾರೆ. ಹಣ್ಣು ತರಕಾರಿ ಇತರೇ ಒಳ್ಳೆಯ ಆಹಾರ ಪದಾರ್ಥಗಳನ್ನು ಬಿಟ್ಟು ಪಾಮ್ ಎಣ್ಣೆ ಯಿಂದ ತಯಾರಿಸಲ್ಪಟ್ಟ 

ಜಂಕ್ ಫುಡ್ ಗಳಿಗೆ ಅಡಿಕ್ಟ್ ಗಳಾಗಿದ್ದಾರೆ.ಕಿರಾಣಿ ಅಂಗಡಿಯಲ್ಲಿ ಸಿಗುವ ಮಕ್ಕಳ ಎಲ್ಲ ಖಾದ್ಯ ಆಹಾರಗಳು  ಪಾಮ್ ಎಣ್ಣೆಯದೇ…. 

ದೊಡ್ಡ ದೊಡ್ಡ   ಬಿಸ್ಕೀಟ್ ಮತ್ತು ಚೊಕಲೇಟ್ ಕಂಪನಿಗಳೂ ಸಹ  ಉಪಯೋಗಿಸುವುದು ಪಾಮ್ ಎಣ್ಣೆಯನ್ನೇ …ಆದರೆ ನಾವೆಲ್ಲರೂ  ಅದನ್ನು  ಆರೋಗ್ಯಕರ ಎಂದು ತಿನ್ನುತ್ತೇವೆ. Lay’s ಎಂಬ   ದೊಡ್ಡ ಕಂಪನಿಯು  ಪಾಶ್ಚಾತ್ಯ ದೇಶಗಳಲ್ಲಿ ಬೇರೆ ತರಹದ ಒಳ್ಳೆಯ  ಎಣ್ಣೆ ಯನ್ನು ಉಪಯೋಗಿಸಿ,  ಭಾರತದಲ್ಲಿ ಮಾತ್ರ,   ಅಗ್ಗವಾಗಿ ಸಿಗುವ  ಪಾಮ್ ಎಣ್ಣೆಯನ್ನು ಬಳಸುತ್ತದೆ. 

ನಾವು   ಪಾಮ್ ಎಣ್ಣೆ ಪದಾರ್ಥ ತಿಂದಾಗ ನಮ್ಮ  ಮೆದುಳು ಸಮರ್ಪಕವಾಗಿ ಕೆಲಸ ಮಾಡಲಾರದೆ   ಹೃದಯದ ಒಳಗೆ  ಮತ್ತು ಹೊರಗೆ ಕೊಬ್ಬು ಶೇಖರಣೆಯಾಗಿ ಮುಂದೆ  ಇದು ಚಿಕ್ಕ ವಯಸ್ಸಿನಲ್ಲಿಯೇ ಮಧುಮೇಹಕ್ಕೆ ಕಾರಣವಾಗುತ್ತದೆ.  

ಚಿಕ್ಕ ವಯಸ್ಸಿನಲ್ಲಿಯೇ ಸಾಯುವ 50 ಪ್ರತಿಶತದಷ್ಟು ಜನರು ಮಧುಮೇಹ ಮತ್ತು ಹೃದಯ ರೋಗದಿಂದ ಸಾಯುತ್ತಾರೆ ಎಂದು ವಿಶ್ವ ಆರ್ಥಿಕ ವೇದಿಕೆ ( World Economic Forum )  ಅಭಿಪ್ರಾಯ ಪಟ್ಟಿದೆ. ಆದ್ದರಿಂದ ರೆಡಿ ಆಹಾರ  ಖರೀದಿಸುವ ಮುನ್ನ ಅದರ  ಲೇಬಲ್ ಅನ್ನು ನೋಡಿ.  ಪಾಮ್ ಎಣ್ಣೆ ಅಥವಾ ಪಾಮೋಲಿನಿಕ್ ಎಣ್ಣೆ ಅಥವಾ ಪಾಲ್ಮಿಟಿಕ್ ಆ್ಯಸಿಡ್  ಅಂತ ಬರೆದಿದ್ದರೆ  ಅದನ್ನು ಖರೀದಿಸಲು ಹೋಗಬೇಡಿ. ನಮ್ಮ ಮಕ್ಕಳು ನಮ್ಮ  ದೇಶದ ಭವಿಷ್ಯ! ಅವರ ಆರೋಗ್ಯ ನಮ್ಮ ಕೈಯಲ್ಲಿದೆ ಎಂಬುದು ನೆನಪಿಡಿ. 

ಪ್ರದೀಪ್ .ಸಿ . ಬಾರ್ಕೂರ.  ಫುಡ್ವಾಯರ್ ಇಂಡಿಯಾ ಕಂಪನಿ ಹಿರಿಯ ಆಹಾರ ಸಲಹೆಗಾರರು ಹೇಳುವಂತೆ ” ಬಜ್ಜಿ, ಬೋಂಡಾ ಮತ್ತು ಹೊಟೇಲ್ , ಬೀದಿಗಳಲ್ಲಿ ಮಾರಾಟವಾಗುವ ಆಹಾರ ಸೇವಿಸುವುದರಿಂದ ಆರೋಗ್ಯಕ್ಕೆ ಅಪಾಯಗಳು ಹೆಚ್ಚು. ಈ ಮಾರಾಟಗಾರರಿಗೆ ಸರಿಯಾದ ಅಡುಗೆ ಮತ್ತು ಕರಿಯುವ ಎಣ್ಣೆಯ ಬಗ್ಗೆ ಅರಿವು,  FSA ಎಫ್ಎಸ್ಎ ( ಭಾರತದ ಆಹಾರ ಸುರಕ್ಷತೆ ) ನಿಯಮಗಳ ಅರಿವು,  ಗ್ರಾಹಕರ ಆರೋಗ್ಯದ ಬಗ್ಗೆ ಕನಿಷ್ಠ ಕಾಳಜಿ  …ಇದ್ಯಾವುದುದರ ಚಿಂತೆ ಇಲ್ಲದ ಕಾರಣ ಜನರ  ಆರೋಗ್ಯಕ್ಕೆ ಭಯಂಕರ ದುಷ್ಪರಿಣಾಮ ಆಗುತ್ತಿದೆ. “ರೈಟ್ ಆಯಿಲ್-ಗುಡ್ ಹೆಲ್ತ್” Right Oil – Good Health  ( RO-GH awareness campaign ) ಜಾಗೃತಿ ಮೂಡಿಸುವುದರ ಮೂಲಕ ‘ ನಾವು ಮೊದಲಿಗೆ ನಮ್ಮ ಸಮಾಜವನ್ನು   ಎಣ್ಣೆ ಮರುಬಳಕೆ -ಅದರ ಅಪಾಯಗಳ ಬಗ್ಗೆ  ಎಚ್ಚೆತ್ತುಕೊಳ್ಳುವಂತೆ ಮಮಾಡಬೇಕು “WHO ಸಂಸ್ಥೆ ಯ ಮೂಲಗಳ ಪ್ರಕಾರ ಹೊಟ್ಟೆ ಕ್ಯಾನ್ಸರ್ ನಲ್ಲಿ 30% ಪ್ರಕರಣಗಳಿಗೆ  ಈ ಎಣ್ಣೆ ಮರುಬಳಕೆಯೇ ಕಾರಣ. ಕರಿಯುವ ಎಣ್ಣೆ ಮರುಬಳಕೆ ಹೆಚ್ಚಾಗಿ ವಾಣಿಜ್ಯ ಬಳಕೆಯಾಗುತ್ತಿರುವ ಉಪಾಹರಗೃಹಗಳಲ್ಲಿ, ಮಾಸ್ ಫೀಡಿಂಗ್  ದರ್ಶಿನಿ ಗಳಲ್ಲಿ ಆಗುತ್ತಿದೆ .ಆಹಾರ ಮಾರಾಟಗಾರಿಗೆ ತಮ್ಮ ದಿನನಿತ್ಯದ ವ್ಯಾಪಾರದಲ್ಲಿ ಎಣ್ಣೆಯ  ಹಾನಿಯ ಬಗ್ಗೆ ಮಾತ್ರ ಚಿಂತೆ . 15 – ದಿನಕ್ಕೆ 20 ಲೀಟರುಗಳು, ಅಂದಾಜಿನಂತೆ   

ನಮ್ಮ ಈ  ಎಣ್ಣೆಯ ವಾಣಿಜ್ಯ ಬಳಕೆದಾರರಿಗೆ  ಸರಿಯಾದ ಸೋಸುವಿಕೆ (Filtration )ವಿಧಾನ ಮತ್ತು  ಎಣ್ಣೆಯನ್ನು ಸ್ಮೋಕ್ ಪಾಯಿಂಟ್ ಅನುಗುಣವಾಗಿ ಸರಿಯಾದ ತಾಪಮಾನದಲ್ಲಿ  ಕರಿಯಬೇಕೆನ್ನುವ  ವಿಚಾರ ಗೊತ್ತಿರುವುದಿಲ್ಲ. ಪ್ರತಿ ದಿನ  Deep ಮತ್ತು shallow fry    ನಂತರ,   55-60% ನಷ್ಟು  ಎಣ್ಣೆ ಕಲುಷಿತ ವಾಗುತ್ತದೆ 

ಆದ್ದರಿಂದ ಅವರು‌ ಎಣ್ಣೆಯ ಸ್ಮೋಕ್ ಪಾಯಿಂಟ್ ಅನುಸಾರ  automatic switch off ಆಗುವಂತಹ ಕಡಾಯಿ ಕಮರ್ಷಿಯಲ್‌ ಬರ್ನರ್ ಗಳನ್ನು ಉಪಯೋಗಿಸಬೇಕು .LPG burner ಗಳು ವಾಣಿಜ್ಯ ಬಳಕೆಯಲ್ಲಿ ಹೆಚ್ಚು ಶಾಖದಲ್ಲಿ‌ ಕೆಲಸ ಮಾಡುವುದರಿಂದ ಬರ್ನರ್ ಗಳಲ್ಲಿ temperature controller ಅನ್ನು ಅಳವಡಿಸಿಕೊಳ್ಳಬೇಕು.  ಇತರ ಕೆಲವು ದೇಶಗಳಲ್ಲಿ ಈ‌ ನಿಯಮ  ಕಡ್ಡಾಯವಾಗಿದೆ (ಇಲ್ಲದಿದ್ದರೆ ದಂಡ ಮತ್ತು ಶಿಕ್ಷೆ ಎರಡೂ ). ಕರಿದ ಎಣ್ಣೆ ಯನ್ನು ಮರುಬಳಕೆ ಮಾಡಬಾರದೆಂದು FSA 2007-2014 ರಲ್ಲಿ ಪ್ರಕಟನೆ ಯಾಗಿದ್ದರೂ ಕೂಡ  ಈ ನಿಯಮ FSA ಪುಸ್ತಕ ದಲ್ಲಿಯೇ ಉಳಿದಿದೆ.   

ಎಣ್ಣೆಯನ್ನು ಸಮರ್ಪಕವಾಗಿ ಮರುಬಳಕೆ ಮಾಡಲು, ಕರಿದ ಎಣ್ಣೆ ಯ ಮೇಲೆ  ಸಿಂಪಡಿಸುವಂತಹ ಕೆಲವು ಮಿನರಲ್ಸ ಗಳು ಸಹ  ಮಾರುಕಟ್ಟೆಯಲ್ಲಿ ಉಪಲಬ್ಧವಿದೆ. 

ಉದಾಹರಣೆಗೆ  Magnesol . 

ಮ್ಯಾಗ್ನೆಸೋಲ್  ಒಂದು ಸುರಕ್ಷಿತ, ಶುದ್ಧ ಬಿಳಿ ಸಂಯುಕ್ತವಾಗಿದ್ದು, ಇದನ್ನು ಪ್ರತಿದಿನ  ಉಪಯೋಗ ಮಾಡುವುದರಿಂದ ಕರಿದ ಎಣ್ಣೆಯ shelf life ಹೆಚ್ಚಾಗುವುದಲ್ಲದೇ ವಾಣಿಜ್ಯ ಬಳಕೆದಾರರ  ಹಣ ಉಳಿತಾಯ ಅಲ್ಲದೇ ಗ್ರಾಹಕರ ಆರೋಗ್ಯ ಕಾಪಾಡುವ ಜವಾಬ್ದಾರಿಯೂ ಸಹ  ಮಾಡಿದಂತೆ ಆಗುವುದು.

ಪ್ರತಿದಿನ ತಿಂಡಿ ಪದಾರ್ಥಗಳನ್ನು ಕರಿಯುವ ಕೆಲಸ ಮುಗಿದ ನಂತರ ಗ್ಯಾಸ್ ಸ್ಟೋವ್ ಆಫ್ ಮಾಡಿ. ನಂತರ  

ಎಣ್ಣೆಯಲ್ಲಿ ಕರಿದುಳಿದ ಕರಕಲಾದ ಆಹಾರ ಚೂರುಗಳನ್ನು ಜಾಲರಿ ಸೌಟಿನಿಂದ ತೆಗೆದುಹಾಕಿ, ಎಣ್ಣೆಯ ತಾಪಮಾನ ಸುಮಾರು  120 ಡಿಗ್ರಿ ಇದ್ದಾಗ , 1 ಲೀಟರ್ ಪ್ರತಿ ಎಣ್ಣೆಗೆ 8 gm ನಷ್ಟು ಮ್ಯಾಗ್ನೆಸೋಲ್ ಪೌಡರ್ ನ್ನು , ಎಣ್ಣೆಯ ಮೇಲೆ ಸಮವಾಗಿ ಉದುರಿಸಿ. ನಂತರ ಎಣ್ಣೆ ಪಾತ್ರೆಯನ್ನು ಅಲುಗಾಡಿಸದಂತೆ 7-8 ತಾಸು ಒಂದು ಕಡೆ ಇಡಬೇಕು. ಆಗ ಈ ಮ್ಯಾಗ್ನಸೋಲ್ , ಎಣ್ಣೆಯಲ್ಲಿರುವ ಕಲ್ಮಶಗಳೊಂದಿಗೆ  ಕೂಡಿ ಕೇಕ್ ರೂಪದಲ್ಲಿ ಪಾತ್ರೆಯ ತಳದಲ್ಲಿ ಉಳಿಯುತ್ತದೆ. ಅದರ ಮೇಲಿನ  ಎಣ್ಣೆಯನ್ನು  ಫಿಲ್ಟರ್ ಮಾಡಿ, ಮತ್ತೆ ಮರುಬಳಕೆ ಮಾಡುವುದರಿಂದ   ಶುಚಿಯಾದ ,ರುಚಿಯಾದ ತಿಂಡಿಗಳನ್ನು ಗ್ರಾಹಕರಿಗೆ ಒದಗಿಸಬಹುದು.  

Magnesol  ಉಪಯೋಗಿಸುವ ವಿಧಾನವನ್ನು ತಿಳಿಯಲು Food Wire India Bangalore Email : barkur.pradeepg@gmail.com ಅವರನ್ನು ಸಂಪರ್ಕಿಸಬಹುದು. 

 

Write a comment
Your email address will not be published. Required fields are marked *